ನಮ್ಮ ಬಗ್ಗೆ
ವ್ಯಾಟಿಕನ್ ನ್ಯೂಸ್ ಪವಿತ್ರ ಪೀಠದ ಸುದ್ದಿ ತಾಣವಾಗಿದೆ. ವ್ಯಾಟಿಕನ್ ರೇಡಿಯೋ, ಒಸ್ಸರ್ವತೋರೆ ರೊಮಾನೋ ಮತ್ತು ವ್ಯಾಟಿಕನ್ ಮಾಧ್ಯಮದ ಜೊತೆಗೂಡಿ ಇದು ಸಮಕಾಲೀನ ಸಂಸ್ಕೃತಿಯಲ್ಲಿ ಧರ್ಮಸಭೆಯ ಸೇವಾಕಾರ್ಯದ ಬೇಡಿಕೆಗಳಿಗೆ ಉತ್ತಮವಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದೆ. ಪೋಪ್ ಫ್ರಾನ್ಸಿಸ್ ಅವರು ಪ್ರೇಷಿತ ಪತ್ರ ಮೊಟು ಪ್ರೊಪ್ರಿಯೊ ಸಂವಹನ ಕಾರ್ಯಾಲಯವನ್ನು ಸ್ಥಾಪಿಸಿತು. ಇದು ಈಗ ರೋಮನ್ ಕ್ಯೂರಿಯಾದ ಒಂದು ಡಿಕಾಸ್ಟ್ರಿ (ಸಚಿವಾಲಯ) ಆಗಿದೆ. ಇದರ ಸ್ಪೂರ್ತಿಯಲ್ಲಿ ವ್ಯಾಟಿಕನ್ ನ್ಯೂಸ್ ಜೂನ್ 27, 2015 ರಲ್ಲಿ ತನ್ನ ಸಾಹಸವನ್ನು ಆರಂಭಿಸಿತು.
ಒಂದು ಸರಳ ಡಿಜಿಟಲ್ ಜಾಲತಾಣ ಎನ್ನುವ ಪರಿಕಲ್ಪನೆಯನ್ನು ಹಿಂದಿಕ್ಕಿ, ವ್ಯಾಟಿಕನ್ ನ್ಯೂಸ್, ಒಂದು ರೀತಿಯಲ್ಲಿ, ವಿವಿಧ ಸಂಸ್ಕೃತಿಗಳಲ್ಲಿನ ಎಲ್ಲಾ ಜನರಿಗೆ ಕರುಣೆಯ ಶುಭ ಸಂದೇಶವನ್ನು ಸಂವಹಿಸುವ ಉದ್ದೇಶದಿಂದ ಸಂವಹನ ಕ್ಷೇತ್ರದಲ್ಲಿ ನಡೆಯುತ್ತಿರುವ ಮುಂದುವರೆದ ಬದಲಾವಣೆಗಳನ್ನು ನೀರೀಕ್ಷಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇದು ಆಡಿಯೋ, ವಿಡಿಯೋ ಹಾಗೂ ಬರಹದ ಮೂಲಕ ಬಹು-ಭಾಷಿಕ, ಬಹು-ಸಾಂಸ್ಕೃತಿಕ, ಬಹು-ವಾಹಿನಿಗಳ, ಬಹು-ಮಾಧ್ಯಮ ಹಾಗೂ ಬಹು-ಯಾಂತ್ರಿಕವಾಗಿ ಸಂವಹಿಸಿ, ಸಂವಾದಿಸುತ್ತದೆ.
ಇಲ್ಲಿ ನಾಲ್ಕು ವಿಷಯಾಧಾರಿತ ಕ್ಷೇತ್ರಗಳು ವಿಶ್ವಗುರುಗಳ ಕಾರ್ಯಕ್ರಮಗಳು, ಪವಿತ್ರಪೀಠ, ಸ್ಥಳೀಯ ಚರ್ಚುಗಳು ಹಾಗೂ ಅಂತರ್‌ರಾಷ್ಟ್ರೀಯ ಸುದ್ದಿಗಳನ್ನು ನೀಡುತ್ತವೆ. ವ್ಯಾಟಿಕನ್ ರೇಡಿಯೋದ ಭಾಷಿಕ ಕಾರ್ಯಕ್ರಮಗಳ ಕಾರ್ಯಕಾರಿ ರಚನೆಯ ಮೇಲೆ ವ್ಯಾಟಿಕನ್ ರೇಡಿಯೋವನ್ನು ಸ್ಥಾಪಿಸಲಾಗಿದೆ. (ಪೋಪ್ ಹನ್ನೊಂದನೇ ಭಕ್ತಿನಾಥರ ಮನವಿಯ ಮೇರೆಗೆ ಗುಗ್ಲಿಯೆಲ್ಮೊ ಮಾರ್ಕೋನಿ ಅವರು ಇದನ್ನು ವಿನ್ಯಾಸಗೊಳಿಸಿ, ರಚಿಸಿರುತ್ತಾರೆ. 12 ಫೆಬ್ರವರಿ 1931 ರಂದು ವ್ಯಾಟಿಕನ್ ರೇಡಿಯೊ ಕಾರ್ಯನಿರ್ವಹಿಸಲು ಆರಂಭಿಸಿತು). ವ್ಯಾಟಿಕನ್ ನ್ಯೂಸ್ ಕೇವಲ ಮಾಹಿತಿಯನ್ನು ನೀಡುವುದು ಮಾತ್ರವಲ್ಲ ಬದಲಿಗೆ ಪ್ರಪಂಚಕ್ಕೆ ವಿಶ್ವಾಸದ ಭರವಸೆಯನ್ನು ತರಲು ಹಾಗೂ ಶುಭ ಸಂದೇಶದ ಬೆಳಕಿನ ಮೂಲಕ ಮಾಹಿತಿಯನ್ನು ವ್ಯಾಖ್ಯಾನಿಸಲು ಶ್ರಮಿಸುತ್ತದೆ. ಇದರ ಮಾರ್ಗದರ್ಶಕ ಮಾನದಂಡ ಹೀಗಿದೆ: “ಸಂಕಷ್ಟ, ಬಡತನ, ತೊಂದರೆಯ ಪರಿಸ್ಥಿತಿಗಳಿಗೆ ವಿಶೇಷ ಗಮನವನ್ನು ನೀಡುವ ಪ್ರೇಷಿತ ಮತ್ತು ಸೇವಾಕಾರ್ಯ.” (ಎಸ್‌ಪಿಸಿಯ ಪ್ಲೀನರಿ ಅಸೆಂಬ್ಲಿಗೆ ಪೋಪ್ ಫ್ರಾನ್ಸಿಸ್ ಅವರ ಭಾಷಣ, 4 ಮೇ, 2017).
ಪ್ರಿಫೆಕ್ಟ್
ಪೌಲೊ ರುಫಿನಿ
ಸಂಪಾದಕೀಯ ನಿರ್ದೇಶಕ
ಆಂಡ್ರಿಯ ತೊರ್ನಿಯೆಲ್ಲಿ
ಉಪ ನಿರ್ದೇಶಕರು
ಸರ್ಜಿಯೊ ಚೆಂತೊಫಾಂತಿ – ಅಲೆಸಾಂದ್ರೊ ಜಿಸೊತ್ತಿ
ವ್ಯವಸ್ಥಾಪಕರು, ರೇಡಿಯೋ ವ್ಯಾಟಿಕಾನ – ವ್ಯಾಟಿಕನ್ ನ್ಯೂಸ್
ಮಾಸ್ಸಿಮಿಲಿಯಾನೋ ಮೆನಿಚೆತ್ತಿ